¡Sorpréndeme!

ಹಾಸನದ ಡಿಸಿ ರೋಹಿಣಿ ವಿರುದ್ಧ ಸಿಎಂಗೆ ದೂರು | Oneindia Kannada

2018-01-06 1,580 Dailymotion

ವಿಧಾನ ಪರಿಷತ್ ಸದಸ್ಯ ಎಂ.ಎ.ಗೋಪಾಲಸ್ವಾಮಿ ಮತ್ತೆ ಸುದ್ದಿಯಲ್ಲಿದ್ದಾರೆ. ಖಡಕ್ ಅಧಿಕಾರಿ ಎದುರು ಕೈಕಟ್ಟಿ ನಿಲ್ಲಲು ಸಾಧ್ಯವಿಲ್ಲ, ನಾನೊಬ್ಬ ಜನಪ್ರತಿನಿಧಿ ಎಂದು ಮತ್ತೆ ಗುಡುಗಿದ್ದಾರೆ. ಈ ಬಾರಿ ಸಿಎಂ ಸಿದ್ದರಾಮಯ್ಯ ಅವರ 'ಕಿವಿ ಕಚ್ಚಿದ್ದಾರೆ' ಕೂಡಾ. ಹೌದು, ದಕ್ಷ ಆಡಳಿತ ನಡೆಸುತ್ತಾ ಸುಧಾರಣೆಯತ್ತ ಜಿಲ್ಲೆಯನ್ನು ಕೊಂಡೊಯ್ಯಲು ಶ್ರಮಿಸುತ್ತಿರುವ ರೋಹಿಣಿ ಸಿಂಧೂರಿ ವಿರುದ್ಧ ಸಿಎಂಗೆ ದೂರು ನೀಡಲಾಗಿದೆ. ಸಿಎಂ ಅವರು ಕೂಡಾ ಕಿವಿಮಾತು ಹೇಳಿದ್ದಾರೆ ಎಂಬ ಸುದ್ದಿ ಬಂದಿದೆ. ಈ ಹಿಂದೆ ಕೂಡಾ ಹಾಸನಾಂಬೆ ದೇಗುಲದ ಸಿದ್ಧತಾ ಕಾರ್ಯ, ಕಾಮಗಾರಿ ಪ್ರಗತಿ ಸಭೆಗಳಿಗೆ ಜನ ಪ್ರತಿನಿಧಿಗಳನ್ನು ಆಹ್ವಾನಿಸುತ್ತಿಲ್ಲ. ಜನಪ್ರತಿನಿಧಿಗಳ ಸಲಹೆ ಕೇಳುತ್ತಿಲ್ಲ ಎಂದು ರೋಹಿಣಿ ವಿರುದ್ಧ ದೂರುಗಳು ಕೇಳಿ ಬಂದಿತ್ತು.ರೋಹಿಣಿ ವಿರುದ್ಧ ಸಭಾಪತಿಗಳಿಗೆ ದೂರು ನೀಡಿದ್ದ ಶಾಸಕ ಗೋಪಾಲಯ್ಯ ಈಗ ಸಿಎಂ ಸಿದ್ದರಾಮಯ್ಯ ಅವರಿಗೆ ದೂರಿದ್ದಾರೆ.


MLC MA Gopal swamy has complained about Hassan DC Rohini sindhuri to CM Siddharamaih .